Chintyake Madutiddi Chinmayaniddane Lyrics Kannada and English ಚಿಂತ್ಯಾಕೆ ಮಾಡುತಿದ್ದಿ
Chintyake Madutiddi Lyrics In Kannada | Chintyake Madutiddi Chinmayaniddane Song Lyrics
ಚಿಂತ್ಯಾಕೆ ಮಾಡುತಿದ್ದಿ ಚಿನ್ಮಯನಿದ್ದಾನೆ
ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ || ಪ ||
ಎಳ್ಳು ಕೊನೆಯು ಮುಳ್ಳುಮೊನೆಯು
ಪೊಳ್ಳು ಬಿಡದೆ ಒಳಗೆ ಹೊರಗೆ
ಎಲ್ಲ ಠಾವಿನಲ್ಲಿ ಗೌರಿ ವಲ್ಲಭನಿದ್ದಾನೆ || ೧ ||
ಹಿಂದೆ ನಿನ್ನ ಸಲಹಿದರ‍್ಯಾರೋ
ಮುಂದೆ ನಿನ್ನ ಸಲಹುವರ‍್ಯಾರೋ
ಅಂದಿಂದೆಂದಿಗೂ ನಂದಿ ವಾಹನನಿದ್ದಾನೆ || ೨ ||
ನಾನು ನೀನು ಎಂಬೋ ಉಭಯ
ಹೀನ ಗುಣಗಳೆಲ್ಲಾ ಕಳೆದು
ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ || ೩ ||
Chintyake Madutiddi Lyrics In English | Chintyake Madutiddi Chinmayaniddane Song Lyrics
Chintyaake maaduttiddi Chinmaya niddaane |
Ninna chinteya bidisuva Gauri kaanta niddane || pa ||
Ellu koneyu mullu moneyu
Pollu bidada olage horage
Ella taavinalli Gowri vallabhaniddane || 1 ||
Hinde ninna salahidaryaaro
Munde ninna salahuvaryaro
Andindendigu Nandi vaahaaniddaane || 2 ||
Naanu neenu embo ubhaya
Heena gunagalella kaledu
Jnaani chidaanand sukha sampoorna niddane || 3 ||